ಲೇಖಕರು: ಕೆ.ವಿ. ತಿರುಮಲೇಶ್ ಬೆಲೆ: 275/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು
ಅವ್ಯಯ ಕಾವ್ಯ’ ಎಂಬ ಹೆಸರಿನ ಈ ಸುದೀರ್ಘ ಸಿಂಫನಿ ರೂಪದ ಕಾವ್ಯರಚನೆ ಒಂದು ರೀತಿಯಲ್ಲಿ
ಅಕ್ಷಯ ಕಾವ್ಯ’ದ ಮುಂದುವರಿಕೆ. ಅಕ್ಷಯ ಕಾವ್ಯ’ ಪ್ರಕಟವಾದಾಗ ಜನ ಅದನ್ನು ಹೇಗೆ ಸ್ವೀಕರಿಸುವರೋ ಎಂದು ಕುತೂಹಲಿಯಾಗಿದ್ದೆ. ಮೂರು ನಾಲ್ಕು ಮಂದಿ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಇದೇ ನನ್ನ ಮಟ್ಟಿಗೆ ಹೆಚ್ಚು. ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಅದನ್ನು ಗುರುತಿಸಿತು. ಅದಕ್ಕಾಗಿ ನನಗೆ ಸಂತೋಷವಿದೆ. ಸದ್ಯದ
ಅವ್ಯಯ ಕಾವ್ಯ’ದಲ್ಲಿ ಅನೇಕ ವಸ್ತುವಿಷಯಗಳು ‘ಅರ್ಥಾರ್ಥ ಸಂಬಂಧವಿರದ’ ಹಾಗೆ ಬರುತ್ತವೆ (ಇದೇ ನನ್ನ ಇಷ್ಟದ ವಿಧಾನ), ಅನೇಕ ಕವಿಗಳ ಉಲ್ಲೇಖಗಳಿವೆ, ನನ್ನ ಸ್ವಂತ ಬದುಕಿಗೆ ಸಂಬಂಧಿಸಿದ ಸಂಗತಿಗಳೂ ಇವೆ. ಅಕ್ಷಯ ಕಾವ್ಯ’ಕ್ಕಿಂತ
ಅವ್ಯಯ ಕಾವ್ಯ’ ಹೆಚ್ಚು ಡ್ರಮಾಟಿಕ್ ಆಗಿದೆ ಎಂದು ನನ್ನ ಅನಿಸಿಕೆ. ಇದನ್ನೆಲ್ಲ ನಾನು ಬೇರೆ ಬೇರೆ ಕವಿಗಳಿಂದ ಕಲಿತುಕೊಂಡುದಲ್ಲದೆ ನನ್ನದೆನ್ನುವುದು ಇಲ್ಲಿ ಏನೂ ಇಲ್ಲ.