Homeಅಸ್ಮಿತೆ (ಕಥಾಸಂಕಲನ)
ಅಸ್ಮಿತೆ (ಕಥಾಸಂಕಲನ)
ಅಸ್ಮಿತೆ (ಕಥಾಸಂಕಲನ)
Standard shipping in 3 working days

ಅಸ್ಮಿತೆ (ಕಥಾಸಂಕಲನ)

 
₹135
Product Description

ಲೇಖಕರು: ಕೃಷ್ಣಮೂರ್ತಿ ಚಂದರ್ ಬೆಲೆ: 150/- ಪುಟಗಳು: 152 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ................... ಈಗೊಂದು ಅರ್ಧಶತಮಾನದಿಂದ ಕನ್ನಡದಲ್ಲಿ ಜೋಲುಮೋರೆ ಸಾಹಿತ್ಯಕ್ಕೆ ಹೆಚ್ಚು ಹೆಚ್ಚು ಬೆಲೆ ಬಂದಿದೆ. ಜಗತ್ತಿನ ಕ್ಲಿಷ್ಟತೆ, ಸಂಕೀರ್ಣತೆ, ವಿಶ್ವದುಃಖ, ಅದಕ್ಕೆ ಬುದ್ಧನ ಮುಲಾಮು ವಗೈರೆ ವಗೈರೆ, ದೊಡ್ಡಹೊರೆಯಾಗಿ ಕನ್ನಡದ ತಲೆಯ ಮೇಲೆÉ ಕೂತಿದೆ. ಇಂತಹ ಕರುನಾಡ ಕರಿಮೋಡಗಳ ನೆರಳಿನಿಂದ ಒಂದು ಕೊಂಚ ಹೊತ್ತು ಅಪ್ಪಿತಪ್ಪಿ ಬಿಸಿಲು ಬಂದರೂ ಅದು ಗಮನಾರ್ಹ, ಸ್ವಾಗತಾರ್ಹ ಅನ್ನೋಣವೇ? ಮತ್ತೆ ನಮ್ಮ ಕನ್ನಡದ ವಾತಾವರಣವನ್ನು ಚೊಕ್ಕಮಾಡಿ, ತಿಳಿಯಾಗಿಸುತ್ತದೆ. ಆಗೀಗ, ಅಂತಹ ಒಂದು ಬಿಸಿಲ ಗಳಿಗೆ ನಮ್ಮ ಈ ಚಂದರ್‍ನ ಬರವಣಿಗೆಯಲ್ಲಿ ಕಾಣಬಹುದು. ಬಿಸಿಲ ಗಳಿಗೆ ಭಾಷೆ, ಸಂವೇದನೆಯ ಸರಳ ಸಲಿಗೆ! ನಮ್ಮ ದೊಡ್ಡ ದೊಡ್ಡ ಹೆಸರಿನ ಬರಹಗಾರರ ಕೃತಿಗಳನ್ನು ಓದಿ ನಾನು ಬಗ್ಗಲಿಲ್ಲವಾದರೂ ಕುಗ್ಗಿದ್ದೆ. ಚಂದರ್‍ನ ಕಥೆಗಳು ನನಗೆ ಭೇಷಾಗಿ ಚಾಚಿ ಮೈಮುರಿದ ಖುಷಿ ಕೊಟ್ಟವು. ರಂಗಯ್ಯಂಗಾರರು, ಆಂಡಾಳಮ್ಮ ಇವರ ಕಥೆಯನ್ನೇ ನೋಡೋಣ. ಸ್ಟ್ರಿಕ್ಟ್ ಆದ ನಿದರ್ಶನವಲ್ಲ, ಆದರೆ ಚಂದರ್‍ನ ಒಟ್ಟು ಧಾಟಿ, ಮನಸ್ಸು, ನೋಟಗಳ ಹರಹು ಇವೆಲ್ಲದರ ನಂಜಿಕೊಳ್ಳುವಂತಹ ಆಸ್ಪದ ಹಾಗೂ ಎಲ್ಲಾ ರೀತಿಯಲ್ಲೂ ಒಂದು ಸರ್‍ಪ್ರೈಸ್ ಎಂಡಿಂಗ್ ಇಲ್ಲಿ ಸಿಗಬಹುದು. ತಿಳಿ ಕಾಮಿಡಿ ಅನ್ನಬಹುದಾದ ಸ್ಥಾಯೀಭಾವ ಈ ಕಥೆಯಲ್ಲಿದೆಯಾ? ಅನ್ನುವುದರೊಳಗೆ ಇನ್ನೇನೋ ಆಗಿಬಿಡುತ್ತದೆ. ಇರಲಿ, ಚಂದರ್‍ರ ಸರಳ ಸಲಿಗೆ' ಅಂದೆನಲ್ಲಾ? ಅದು ಪ್ರತಿ ವಾಕ್ಯದಲ್ಲೂ ಎಷ್ಟು ಸಮಂಜಸವಾಗಿ ಪ್ರಿಸೈಸ್ ಆಗಿ, ಬರಹಗಾರನ ಬೇಡಿಕೆಗಳನ್ನು ನಿಭಾಯಿಸುತ್ತದೆ. ಇದು ಮುಖ್ಯ. ಏಕೆಂದರೆ ಇದರಿಂದಲೇ ನನಗನ್ನಿಸುವುದು ಈ ರೀತಿಯ ಬರಹದ ತೂಕ ಹೆಚ್ಚುತ್ತದೆ. ಕನ್ನಡದಲ್ಲಿ ಇದರ ಪರಂಪರೆಯೇ ಇದೆ ಅನ್ನಬಹುದೆ? ಕೈಲಾಸಂ ಬಹು ದೊಡ್ಡ ಹೆಸರು ಪೋಲಿಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳಲ್ಲಿ ಏನೆಲ್ಲಾ ನಿಭಾಯಿಸುವುದಿಲ್ಲ? ಈ ಕಥೆಯ ಮೈನ್ ಮೂಡ್ ಮತ್ತು ಅದನ್ನು ರೂಪಿಸುತ್ತಿರುವ ಭಾಷೆ ಇವೇ ಅದರ ಅಂತ್ಯದ ಹಾರರ್ (hoಡಿಡಿoಡಿ) ಅನ್ನು ಹೊತ್ತುಕೊಳ್ಳುತ್ತವೆ. ಬರಿಯ ನಗೆಗಡಲಲ್ಲಿ,ಪೋಯಿಟು ವರೆಯಾ ಕಣ್ಣಾ' ದ ಆಘಾತ, ಅಡುಗೆಮನೆಯ ನಂದಾದೀಪ ತರುವ ಇಚ್ಛೆ - ಇದರ ಭೀಕರ ವ್ಯಂಗ್ಯ ಎಲ್ಲವನ್ನೂ ಚಂದರ್‍ನ ಕನ್ನಡ ಧಾಟಿ ದಕ್ಷವಾಗಿ, ಬ್ರಿಲಿಯಂಟ್ ಆಗಿ ಹಿಡಿದಿಡುತ್ತದೆ.

  • ರಾಜೀವ ತಾರಾನಾಥ (ಮುನ್ನುಡಿಯಿಂದ)
Share

Secure Payments

Shipping in India

Great Value & Quality
Payment types
Create your own online store for free.
Sign Up Now