Homeಬಿಟ್ಟ ಸ್ಥಳ (ಕಥಾಸಂಕಲನ)
ಬಿಟ್ಟ ಸ್ಥಳ (ಕಥಾಸಂಕಲನ)
ಬಿಟ್ಟ ಸ್ಥಳ (ಕಥಾಸಂಕಲನ)
Standard shipping in 3 working days

ಬಿಟ್ಟ ಸ್ಥಳ (ಕಥಾಸಂಕಲನ)

 
₹180
Product Description

ಲೇಖಕರು: ಪ್ರಜ್ಞಾ ಮತ್ತಿಹಳ್ಳಿ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ............. ಬಹುಮುಖೀ ಅನುಭವಗಳೊಂದಿಗೆ ಅವುಗಳ ಅಭಿವ್ಯಕ್ತಿಗೆ ಬೇಕಾದ ಪರಿಕರಗಳನ್ನೂ ಹೊಂದಿರುವ ಲೇಖಕಿ ಪ್ರೀತಿಯ ಪ್ರಜ್ಞಾ ಮತ್ತಿಹಳ್ಳಿ ಅವರ ಪ್ರಥಮ ಕಥಾ ಸಂಕಲನವಿದು. ಉತ್ತರ ಕನ್ನಡದ ಜನ, ಅವರ ಭಾವ-ಚರ್ಯೆ, ಹವಿಗನ್ನಡ, ಧಾರವಾಡ ಕನ್ನಡದ ಲಯಗಾರಿಕೆ, ಕಥೆಯ ನೇಯ್ಗೆಯಲ್ಲೇ ಪುಟಿಯುವ ಮೃದು ಹಾಸ್ಯ, ಈ ಎಲ್ಲದರೊಂದಿಗೆ ಇಲ್ಲಿನ ಕಥÉಗಳ ಒಡಲು ಬಿಚ್ಚಿಕೊಳ್ಳುತ್ತದೆ. ಕವಿ ಮತ್ತು ಪ್ರಬಂಧÀಗಾರ್ತಿ ಅಷ್ಟೇ ಅಲ್ಲ, ಪ್ರಜ್ಞಾ ಒಬ್ಬ ಯಕ್ಷಗಾನ ಕಲಾವಿದೆಯೂ ಆಗಿರುವುದರಿಂದಾಗಿ ಅವರ ಕತೆಗಾರಿಕೆಗೆ ಅವರದೇ ಆದೊಂದು ಕೆನ್ವಾಸು ಲಭ್ಯವಾಗಿರುವುದು ಅತ್ಯಂತ ಗಮನಾರ್ಹ ಸಂಗತಿ. ಇಲ್ಲಿನ ಇಲ್ಲಿನ ಕಥೆಗಳು ಆಧುನಿಕತೆಯ ಸ್ಪರ್ಶದೊಂದಿಗೆ ತರುಣ ಲೋಕವನ್ನೇ ಹೆಚ್ಚು ತೆರೆದಿಡುವುದು ಕುತೂಹಲಕಾರಿ. ನಿರೂಪಣೆಯ ಹಿನ್ನೆಲೆಯಲ್ಲಿ ಕಾಣುವ ತಾಳಮದ್ದಲೆಯ ಸಂಸ್ಕಾರದ ಒಂದು ವಿಶಿಷ್ಟ ಧ್ವನಿಯೂ ಕೆಲ ಅಪೂರ್ವ ನುಡಿಚಿತ್ರಗಳೂ (ಉದಾ: ಕ್ರೌರ್ಯವೇ ಚಕ್ಕಲ ಮುಕ್ಕಲ ಹಾಕಿ ಕೂತಂತಿರುವ, ಅಂದಷ್ಟೇ ಜುಳುಜುಳು ನಾದ ಹಾಡುವ ನೊರೆ ನೊರೆ ನೀರು ಇತ್ಯಾದಿ) ಇಲ್ಲಿನ ಪರ್ಯಾವರಣಕ್ಕೆ ತಾಜಾತನ ಕೊಡಮಾಡಿವೆÉ. ಎಂತಲೇ ಕಥಾಮಾರ್ಗದಲ್ಲಿ ಪ್ರಜ್ಞಾ ಅವರ ಮುಂದಿನ ನಡೆಯ ಬಗ್ಗೆ ಅಪಾರ ಭರವಸೆಯಿಂದ ಎದುರು ನೋಡುವಂತಾಗಿದೆ.

ವೈದೇಹಿ ಮಣಿಪಾಲ

Share

Secure Payments

Shipping in India

Great Value & Quality
Payment types
Create your own online store for free.
Sign Up Now